Anitha Naresh Manchi

MyFreeCopyright.com Registered & Protected

Wednesday, December 15, 2010

* * ಪುಳಕ



ಹಾರಾಡುವ ಜೀವಕ್ಕೆ
ಒಮ್ಮೆ ಕಾಲೂರಿ ನಿಲ್ಲುವ ಆಸೆ
ಆಸರೆಗೆ ಯಾರಾದರೇನು .. ?
ಮುಗಿದ ಅಧ್ಯಾಯದಂತೆ
ಪುಟ ಮುಚ್ಚಿ ಮಲಗಿದ್ದ
ಸಣ್ಣ ಒಣ ಕೊರಡು 


ಚೈತನ್ಯದ ಧಾರೆಯೇ ಎರಕ ಹೊಯ್ದ
ಪುಟ್ಟ ಪಾದ
ವಿಶ್ರಾಂತಿಯ ಬೇಡಿ
ಮೃದುವಾಗಿ ಸೋಕಲು
ಸತ್ತು ಬಿದ್ದ ಮನ
ಪುಳಕಿತಗೊಂಡು
ಕ್ಷಣ ಹೊತ್ತು ಮತ್ತೆ ಬದುಕಿತು 

1 comment:

  1. ಚಂದವಾಗಿದೆ :)

    ಸತ್ತು ಬಿದ್ದ ಮನಪುಳಕಿತಗೊಂಡು
    ಕ್ಷಣ ಹೊತ್ತು ಮತ್ತೆ ಬದುಕೀತೆ ?

    ReplyDelete