Anitha Naresh Manchi

MyFreeCopyright.com Registered & Protected

Saturday, January 29, 2011

* * ಮುಗಿಯದ ಪಯಣ




 ನೆಟ್ಟ ನೋಟದಿ ಚಲಿಸುತ್ತಿತ್ತು, ತನ್ನ ಗುರಿಯೆಡೆಗೆ 
ನಡು ನಡುವೆ ನಿಂತು ಸಾಗಿಸುತ್ತಿತ್ತು, ಎಲ್ಲರ ಅವರವರ ಗುಡಿಯೆಡೆಗೆ 
ಏರು ತಗ್ಗುಗಳ ದಾಟಿ ಮುಂದೆ  ಮುಂದೆ 
ಮರೆಯಾಯಿತೆ ಬಂದ ದಾರಿ ಹಿಂದೆ 
ಕಾಲ ಯಾವುದೇ ಇರಲಿ,ಮಿತಿಯಿಲ್ಲದ ಹೊತ್ತು 
ಜನರ ಸಂಕಟವು ಅದಕೆ ಗೊತ್ತು 
ಯಂತ್ರವಾದರು ಇದೆಯೆ ಹೃದಯವಿದಕೆ 
ಈಡೇರಿಸುವುದು ಪ್ರತಿ ಮನದ ಬಯಕೆ 
ಜನರಿಗೆನೋ ತಮ್ಮದೇ ಊರು,ನಿಲ್ದಾಣ 
ಇದಕಾದರೂ ಒಮ್ಮೆ ನಿಂತರೂ, ಮುಂದುವರಿಯಬೇಕಿದೆ ಯಾನ 
ಬೇರಾಗಿಸುವುದೂ, ಒಂದುಗೂಡಿಸುವುದು ತನಗರಿಯದೆ 
ಮತ್ತೆ ಸಾಗಿತದು .. ಎಲ್ಲಿಗೀ ಪಯಣ ಬಗೆ ಹರಿವುದೇ   

No comments:

Post a Comment