ಸೋಕಿ ಪುಳಕಿತಗೊಂಡು ಪಿಸುಗುಟ್ಟಿದರೂ
ಮಾರ್ನುಡಿಯದ ಒರಟ....
ಹುಚ್ಚೆದ್ದ ಶರಧಿ
ತನ್ನ ತೋಳೊಳಗೆ ಬಂಧಿಸಿ ಆವರಿಸಿದರೂ
ಜಾರಿಸಿ ಸರಿಸಿ ಬೀರುವ ಒಣ ನೋಟ ....
ಅಲೆ ಒಂದಿಷ್ಟು ದೂರ ಸರಿದರೆ ಸಾಕು
ಕಾವೇರಿದ ಬೆಳಕಿಗೆ ಮೈಯೊಡ್ಡಿ
ಹಗುರಾಗುವ ನಿರ್ಧಯ ....
ಎಂದೆಲ್ಲ ಜರಿದರೂ
ಕಲ್ಲು ಹೃದಯ
ಕಾಯುತ್ತಲೇ ಇರುತ್ತದೆ.....
ಹನಿ ಹನಿ ಪ್ರೀತಿಯ ಸಿಂಚನಕ್ಕೆ ಒದ್ದೆಯಾಗಲು
ಕನಸಲ್ಲೂ ಕನವರಿಸಿ
ಮನದಲ್ಲೇ ನುಡಿಯುತ್ತದೆ ಕಡಲಲೆಗೆ
ಬಂದು ಬಿಡು ನನ್ನೊಡನೆ ಎಂದೂ ಮರಳದಂತೆ....
ಮತ್ತೆ ಮತ್ತೆ ಕಚಗುಳಿ ಇಡೋ ಸಾಲುಗಳು...
ReplyDeleteಬಹಳ ಇಷ್ಟ ಆಯಿತು...
ಅಂತ ಸಾವಿರ ಅಲೆಗಳ ಹೊಡೆತಕ್ಕೆ ಸಿಕ್ಕಿದಾಗಲೇ ಕಲ್ಲೂ ಸುಣುಪಾಗಿ ಚಿತ್ರ ವಿಚಿತ್ರ ಆಕಾರಕ್ಕೆ ಬಂದು ನೋಟ ಸೆಳೆಯುವುದು.
ReplyDeleteಅವಳ ಅಲೆ ಇನ್ನೂ ರಭಸವಾಗಿ ನಮ್ಮ ಮನ ಕಲ್ಲು ಬಂಡೆಯ ಉಜ್ಜಲಿ.